Guidelines to use the RTC Application : -

ಸಾರ್ವಜನಿಕರು ಆರ್.ಟಿ.ಸಿಯನ್ನು ವೀಕ್ಷಣೆ ಮಾಡುವುದು ಹೇಗೆ ? - How to view RTC ?
ಮೊದಲಿಗೆ ಸಾರ್ವಜನಿಕರು ತಮ್ಮ ಹೆಸರು ಹಾಗೂ ಇ-ಮೇಲ್ ವಿಳಾಸಗಳನ್ನು ನೋಂದಾಯಿಸಬೇಕು. ತದನಂತರ ನೋಂದಾಯಿಸಿದ ಹೆಸರು , ಇ-ಮೇಲ್ ವಿಳಾಸಗಳನ್ನು ನಮೂದಿಸಬೇಕು ಹಾಗೂ ಪರದೆಯಲ್ಲಿ ತೋರಿಸುತ್ತಿರುವ CAPTCHA ಸಂಖ್ಯೆಯನ್ನು ನಮೂದಿಸಿ submit ಬಟನ್ ಮೇಲೆ ಕ್ಲಿಕ್ ಮಾಡಬೇಕು.

For the first time, citizen has to register their name and E-mail ID. Then type the name, E-mail ID and Captcha. Click on Submit button


ಜಿಲ್ಲೆಯ ಆಯ್ಕೆ ಮಾಡಿ - Select District


ಜಿಲ್ಲೆಯ ನಂತರ ತಾಲ್ಲೂಕು ಆಯ್ಕೆ ಮಾಡಿ - Select Taluk



ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿ - Select Hobli & Village



ಗ್ರಾಮದ ಆಯ್ಕೆಯ ನಂತರ, ನೀವು ವೀಕ್ಷಿಸಬೇಕಾಸದ ಆರ್.ಟಿ.ಸಿಯ ಸರ್ವೆನಂಬರನ್ನು ನಮೂದಿಸಿ - Type the survey number



ಸರ್ವೆನಂಬರಿನ ಅಕ್ಷರ ಭಾಗವನ್ನು (Surnoc.No) ಆಯ್ಕೆ ಮಾಡಿ - ಅಕ್ಷರ ಭಾಗವನ್ನು ಆಯ್ಕೆಮಾಡಬೇಕು - Select the Surnoc



ಹಿಸ್ಸಾನಂಬರನ್ನು ಆಯ್ಕೆ ಮಾಡಿರಿ - ಸರ್ವೆ ನಂಬರಿನ ಸಬ್ ನಂಬರನ್ನು ಹಿಸ್ಸಾ ನಂಬರೆನ್ನುವರು. ಬಹುಮಾಲೀಕತ್ವದ ಆರ.ಟಿ.ಸಿಯು ಪೋಡಿಯಾಗಿ (ಭಾಗವಾಗಿ) ಏಕಮಾಲೀಕತ್ವದ ಆರ್.ಟಿ.ಸಿಯಾದಾಗ ಹಿಸ್ಸಾನಂಬರನ್ನು ಕೊಡಲಾಗುತ್ತದೆ -

Select Hissa number, Hissa is the sub number of Survey number. If division happens in multiple owner RTC then new hissa number is given . ex : survey No 20 becomes 20/1, 20/2 & 20/3 - 1,2,3 are known as hissa number




ಅವಧಿಯನ್ನು ಆಯ್ಕೆ ಮಾಡಿ- ಅವಧಿಯ ಸಹಾಯದಿಂದ ಪ್ರಸ್ತುತ ಅವಧಿಯ ಆರ್.ಟಿ.ಸಿ ಅಥವಾ ಹಳೆಯ ಅವಧಿಯ ಆರ್.ಟಿ.ಸಿ ಯನ್ನು ವೀಕ್ಷಿಸಬಹುದು. ಆರ್.ಟಿ.ಸಿ ಯಲ್ಲಿ ಬದಲಾವಣೆಯಾದ ಸಂದರ್ಭ ದಲ್ಲಿ (ಮ್ಯುಟೇಶನ್ ಮುಖಾಂತರ) ಅವಧಿಯು ಉಂಟಾಗುತ್ತದೆ.

Select Period - By using period citizen can view present or Old RTC. Period is created, whenever mutation (Change of owner details) happened



ವರ್ಷವನ್ನು ಆಯ್ಕೆ ಮಾಡಿ - ಯಾವ ವರ್ಷದ ಆರ್.ಟಿ.ಸಿ ಯನ್ನು ವೀಕ್ಷಿಸ ಬಯಸುತ್ತಿರೋ, ಆ ವರ್ಷವನ್ನು ಆಯ್ಕೆ ಮಾಡಿ - Which year RTC want to see, select that Year.



Fetch Details ಬಟನ್ ಮೇಲೆ ಕ್ಲಿಕ್ ಮಾಡಿ - Click on Fetch Details button



ಆರ್.ಟಿ.ಸಿ ಯಲ್ಲಿನ ವಿವರಗಳು ಕೆಳಗಿನಂತೆ ಗೋಚರಿಸುತ್ತವೆ - RTC details are showing as shown



View ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಂಪೂರ್ಣ ಆರ್.ಟಿ.ಸಿ ಯನ್ನು ವೀಕ್ಷಿಸಬಹುದು. Click on View button to view entire RTC.